DTE ಡ್ಯಾಶ್ ಬೋರ್ಡ್
ಪರಿಚಯ
ತಾಂತ್ರಿಕ ವಿಷಯದ ಕೌಶಲ್ಯವನ್ನು ಕಲಿಸುವ ವಿದ್ಯಾಸಂಸ್ಥೆಗಳನ್ನು 1943ನೇ ಇಸವಿಯಲ್ಲಿ ಪ್ರಾರಂಭಿಸಲಾಗಿತ್ತು. ಅವುಗಳನ್ನು "ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್" ಗಳೆಂದು ಕರೆಯಲಾಗುತಿತ್ತು. ನಂತರ ಇದನ್ನು ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಪಠ್ಯಕ್ರಮದೊಂದಿಗೆ "ಪಾಲಿಟೆಕ್ನಿಕ್ " ಗಳೆಂದು ಮರು ನಾಮಕರಣ ಮಾಡಿಲಾಯಿತು. ಆಗ ಸಂಸ್ಥೆಗಳು "ಪಬ್ಲಿಕ್ ಇನ್ ಸ್ತ್ರಕ್ಷನ್ ಡಿಪಾರ್ಟ್ಮೆಂಟ್ " ನ ಅಧೀನದಲ್ಲಿದ್ದವು. ತದನಂತರ ಪಾಲಿಟೆಕ್ನಿಕ್ ಸಂಸ್ಥೆಗಳ ಹಾಗು ತಾಂತ್ರಿಕ ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಾದುದರಿಂದ 1959 ರಲ್ಲಿ "ತಾಂತ್ರಿಕ ಶಿಕ್ಷಣ ಇಲಾಖೆ" ಅಸ್ತಿತ್ವಕ್ಕೆ ಬಂದಿತು.
ತಾಂತ್ರಿಕ ಶಿಕ್ಷಣ ಆಯುಕ್ತಾಲಯವು ನಿರ್ದೇಶನಾಲಯವು ರಾಜ್ಯ ಮತ್ತು ರಾಷ್ಟ್ರ ನೀತಿಯೊಂದಿಗೆ ತಾಂತ್ರಿಕ ಶಿಕ್ಷಣದ ಯೋಜಿತ ಅಭಿವೃದ್ದಿಯನ್ನು ಖಚಿತಪಡಿಸುತ್ತದೆ. ಉದ್ಯಮ, ವ್ಯವಹಾರ ಮತ್ತು ಸಮುದಾಯಕ್ಕೆ ಅಗತ್ಯವಾದ ಆಧಾರಿತ, ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಮಾನವ ಸಂಪನ್ಮೂಲಗಳನ್ನು ಒದಗಿಸಲು ಇಲಾಖೆ ಬದ್ದವಾಗಿದೆ. ಇಲಾಖೆಯು 85 ಸರ್ಕಾರಿ, 44 ಅನುದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್ ಗಳು, 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು 9 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 6 ಕಿರಿಯ ತಾಂತ್ರಿಕ ಶಾಲೆಗಳನ್ನು ನಿರ್ವಹಿಸುತ್ತದೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಕಾರ್ಯವು ತಾಂತ್ರಿಕ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವುದು ಹಾಗೂ ಅರ್ಹ ಅಭ್ಯರ್ಥಿಗಳಿಗೆ ತಾಂತ್ರಿಕ ಪರೀಕ್ಷಾ ಮಂಡಳಿಯು ಡಿಪ್ಲೋಮಾ/ಪೋಸ್ಟ್ ಡಿಪ್ಲೋಮಾ/ಟೈಲರಿಂಗ್ ಕೋರ್ಸ್ ಗಳಿಗೆ ಪರೀಕ್ಷೆ ನಡೆಸಿ, ಅರ್ಹ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡುವುದು.
ದೂರದೃಷ್ಟಿ
- ಯೋಜನಬದ್ಧವಾದ ಹಾಗೂ ಸಮರ್ಥವಾದ ತಾಂತ್ರಿಕ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯದಲ್ಲಿ ವೃದ್ಧಿಗೊಳಿಸುವುದು.
- ಬೇಡಿಕೆಗೆ ಆನುಗುಣವಾಗಿ ಡಿಪ್ಲೋಮಾ ಸಂಸ್ಥೆಗಳಿಗೆ ಯೋಜನೆಗಳನ್ನು ರೂಪಿಸುವುದು ಮತ್ತು ಸಾಕಷ್ಟು ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
- ನಿಷ್ಪಕ್ಷಪಾತ ಮೌಲ್ಯಮಾಪನ ಪದ್ದತಿ ಹಾಗೂ ದೃಢೀಕರಣ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗಳಿಗೆ ನೀಡುವುದು.
- ಎ.ಐ.ಸಿ.ಟಿ.ಇ, ಎಂ.ಹೆಚ್.ಆರ್.ಡಿ , ಎನ್,ಐ.ಟಿ.ಟಿ.ಆರ್, ವಿಶ್ವವಿದ್ಯಾಲಯಗಳು , ಕೈಗಾರಿಕೆಗಳು ಮತ್ತು ಇತರೆ ರಾಜ್ಯದ ನಿರ್ದೇಶನಾಲಯಗಳೊಂದಿಗೆ ಸಮನ್ವಯ ಸಾಧಿಸುವುದು.
- ತಾಂತ್ರಿಕ ಶಿಕ್ಷಣ ವಲಯಕ್ಕೆ ಅವಶ್ಯವಿರುವ ದೀರ್ಘಾವಧಿ ಯೋಜನೆಗಳನ್ನು ನಿರೂಪಿಸುವುದು ಹಾಗೂ ಆಯವ್ಯಯ ವಿಭಜನೆ ಮಾಡಿ ಸರಿಯಾದ ಹಂಚಿಕೆ ಮತ್ತು ಸದ್ಬಳಕೆ ಮಾಡುವುದು.
- ಕೆಳಗಿನ ಅಂಶಗಳಿಗೆ ಗುಣಾತ್ಮಕವಾದ ಮತ್ತು ಸಾಮಾಜಿಕ ನ್ಯಾಯಯುತವಾದ ರೂಪರೇಷೆಗಳನ್ನು ನಿಯಮಿತಗೊಳಿಸುವುದು.(i)ವಿದ್ಯಾರ್ಥಿಗಳ ಪ್ರವೇಶಾತಿ (ii)ಶಿಕ್ಷಕ ವೃಂದದ ನೇಮಕಾತಿ, ತರಬೇತಿ ಮತ್ತು ತಾಂತ್ರಿಕ ಶಿಕ್ಷಣದ ಸರ್ವಾಂಗೀಣ ಅಭಿವೃದ್ದಿ.
- ವಿದ್ಯಾರ್ಥಿಗಳ ಹಾಗೂ ಶಿಕ್ಷಕ ವರ್ಗದ ಸರ್ವಾಂಗೀಣ ಅಭಿವೃದ್ದಿ, ವಿದ್ಯಾರ್ಥಿಗಳಿಗೆ ಉದ್ಯೋಗ-ಮಾರ್ಗದರ್ಶನ,ಕುಂದು ಕೊರತೆಗಳ ಪರಿಹಾರ ಮತ್ತು ಸಲಹಾ ಸೇವೆಗಳನ್ನು ನೀಡುವುದು.
- ಆಯುಕ್ತಾಲಯದ ಶಾಖೆಗಳು ಸಾರ್ವಜನಿಕರ ಹಾಗೂ ಎಲ್ಲಾ ಸಂಸ್ಥೆಗಳೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳುವಂತೆ ನೋಡುವುದು ಮತ್ತು ಕುಂದು ಕೊರತೆಗಳ ನಿವಾರಣೆಗೆ ಸ್ಪಂದಿಸುವುದು.
ನಿರ್ದಿಷ್ಟ ಪಡಿಸಿದ ಗುರಿ
ರಾಷ್ಟ್ರ ಹಾಗೂ ರಾಜ್ಯದ ಶೈಕ್ಷಣಿಕ ನೀತಿಗನುಗುಣವಾಗಿ ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲು ತಾಂತ್ರಿಕ ಶಿಕ್ಷಣ ಆಯುಕ್ತಾಲಯವು ಬದ್ಧವಾಗಿರುತ್ತದೆ.ಆಯುಕ್ತಾಲಯವು ಕೈಗಾರಿಕೆ, ವಾಣಿಜ್ಯ ಮತ್ತು ಸಮಾಜದ ಅವಶ್ಯಕತೆಗೆ ತಕ್ಕಂತೆ ಗುಣಾತ್ಮಕ, ತಾಂತ್ರಿಕ ಮತ್ತು ವೃತ್ತಿಪರ ಪರಿಣಿತ ಮಾನವ ಸಂಪನ್ಮೂಲವನ್ನು ಒದಗಿಸಲು ಬದ್ಧವಾಗಿರುತ್ತದೆ . ಮೇಲಿನ ದೂರದೃಷ್ಟಿಯ ಗುರಿಯನ್ನು ಈ ಕೆಳಕಂಡಂತೆ ಸಾಧಿಸಲಾಗುವುದು.
- ಸಮಾಜದ ಅವಶ್ಯಕತೆಯನ್ನು ಪೂರೈಸುವಂತಹ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ,ನಿರ್ವಹಣೆ ಮತ್ತು ಬೆಳವಣಿಗೆಗೆ ಶ್ರಮಿಸುವುದು.
- ಯುವಕರು ಮತ್ತು ವಯಸ್ಕರ ಅವಶ್ಯಕತೆಗೆ ತಕ್ಕಂತೆ ಸಾಂಪ್ರದಾಯಿಕ ಮತ್ತು ಸಂಪ್ರದಾಯಕವಲ್ಲದ ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸಿ ತಾಂತ್ರಿಕ ಶಿಕ್ಷಣವನ್ನು ವಿಸ್ತಾರಗೊಳಿಸಲು ಪ್ರೋತ್ಸಾಹಿಸುವುದು.
- ಬದಲಾಗುತ್ತಿರುವ ಕೈಗಾರಿಕಾ ನೀತಿ ಮತ್ತು ಸಮಾಜದ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸುವ ಜವಾಬ್ಧಾರಿಯುತ ಮತ್ತು ಸಮರ್ಥ ತಾಂತ್ರಿಕ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವುದು.
- ವೃತ್ತಿ ಪರವಾದ ಮಾದರಿ ಆಡಳಿತ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸುವುದು.
- ಪರಿಣಾಮಕಾರಿ ನಿರ್ಣಯಗಳಿಗಾಗಿ ಉತ್ತಮ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸುವುದು.
- ಮಹಿಳೆಯರು ,ಅಂಗವಿಕಲರು,ಗ್ರಾಮೀಣರು ,ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರುಗಳ ವಿದ್ಯಾಭ್ಯಾಸದ ಅವಶ್ಯಕತೆಯನ್ನು ಪೂರೈಸಲು ಹೆಚ್ಚಿನ ಆದ್ಯತೆಯನ್ನು ನೀಡುವುದು.
- ವಿದ್ಯಾರ್ಥಿಗಳ ಉದ್ಯೋಗ ಮತ್ತು ಮಾರ್ಗದರ್ಶನ ಸೇವೆಗಳನ್ನು ಬಲಪಡಿಸುವುದು.
- ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಹಯೋಗ ಬೆಳೆಸುವುದು.
ನಮ್ಮ ಪ್ರಮುಖ ಮೌಲ್ಯಗಳು
- i) ಸಮಾನತೆ, ಮಾನವೀಯತೆ
ii) ಪಾರದರ್ಶಕ ಕಾರ್ಯಾಚರಣೆ
iii) ಪ್ರವೇಶ ಸಾದ್ಯತೆ,ದಕ್ಷತೆ
iv) ತೆರೆದ ಸಂವಹನ ಮತ್ತು
v) ಪರಿಸರ ಅಭಿವೃದ್ದಿಗಾಗಿ ಕಾಳಜಿ
ಸಾಂಸ್ಥಿಕ ರಚನೆ
ಕ್ರಮ ಸಂಖ್ಯೆ
|
ಹೆಸರು ಮತ್ತು ಹುದ್ದೆ
|
1
|
ಡಾ. ಅಶ್ವಥ್ ನಾರಾಯಣ ಸಿ.ಎಸ್
ಮಾನ್ಯ ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರು
|
 |
2
|
ಶ್ರೀಮತಿ ರಶ್ಮಿ ವಿ ಮಹೇಶ್, ಐ.ಎ.ಎಸ್
ಪ್ರಧಾನ ಕಾರ್ಯದರ್ಶಿಗಳು
ಉನ್ನತ ಶಿಕ್ಷಣ ಇಲಾಖೆ
|
 |
3
|
ಶ್ರೀ ಪ್ರದೀಪ್ ಪಿ, ಐ.ಎ.ಎಸ್.
ಆಯುಕ್ತರು
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ
|
 |
4
|
ಶ್ರೀ ಎನ್ ರವಿಚಂದ್ರನ್
ನಿರ್ದೇಶಕರು
ತಾಂತ್ರಿಕ ಶಿಕ್ಷಣ ಇಲಾಖೆ
|
 |
ಇಲಾಖೆಯ ಕಾರ್ಯ ವ್ಯವಸ್ಥೆಯ ನಕ್ಷೆ

ಆಯುಕ್ತಾಲಯದ ಕಾರ್ಯಗಳು
1) ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳ ಹಾಗೂ ಡಿಪ್ಲೋಮಾ ಪಾಲಿಟೆಕ್ನಿಕ್ ಗಳ ಆಡಳಿತ ನಿಯಂತ್ರಣ , ಮೇಲ್ವಿಚಾರಣೆ ಹಾಗೂ ಅಭಿವೃದ್ದಿಗಾಗಿ ಯೋಜನೆಯನ್ನು ರೂಪಿಸುವುದು , ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸುವುದು.
2) ರಾಜ್ಯದಲ್ಲಿನ ಇಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೋಮಾ ಮಟ್ಟದಲ್ಲಿ ಹೊಸ ಕೋರ್ಸ್ ಗಳನ್ನು ಗುರುತಿಸುವುದು ಮತ್ತು ಹೊಸ ಕಾಲೇಜು ಪ್ರಾರಂಭಿಸಲು ಮೂಲಭೂತ ಸೌಲಭ್ಯ ಪರಿಶೀಲಿಸಿ ಶಿಫಾರಸ್ಸು ಮಾಡುವುದು.
3) ತಾಂತ್ರಿಕ ಗುಣಮಟ್ಟವನ್ನು ಕಾಪಾಡಲು ಎಲ್ಲಾ ತಾಂತ್ರಿಕ ಸಂಸ್ಥೆಗಳ ತಪಾಸಣೆಯನ್ನು ಕಾಲಕಾಲಕ್ಕೆ ನಡೆಸುವುದು.
4) ಡಿಪ್ಲೋಮಾ ಪ್ರವೇಶಾತಿಗಾಗಿ ಅಭ್ಯರ್ಥಿಗಳ ಆಯ್ಕೆಗೆ ಸೂಕ್ತ ಕಾರ್ಯವಿಧಾನ ತಯಾರಿಸಿ, ಮಾರ್ಗದರ್ಶನ ನೀಡುವುದು.
5) ಡಿಪ್ಲೋಮಾ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದು , ತೇರ್ಗಡೆಯಾದ ಅಭ್ಯರ್ಥಿಗಳಿಗೆ ಡಿಪ್ಲೋಮಾ ತರುವಾಯ ಪ್ರಮಾಣ ಪತ್ರಗಳನ್ನು ವಿತರಿಸುವುದು.
6) ಸರ್ಕಾರಿ ಮತ್ತು ಖಾಸಗಿ ಅನುದಾನಿತ ತಾಂತ್ರಿಕ ಸಂಸ್ಥೆಗಳಿಗೆ ಶೈಕ್ಷಣಿಕ ಮಂಜೂರಾತಿ ನೀಡುವುದು.
7) ಅನುದಾನಿತ ಪಾಲಿಟೆಕ್ನಿಕ್ ಗಳಿಗೆ ಅನುದಾನ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಮಂಜೂರು ಮಾಡುವುದು.
8) ಉನ್ನತ ವ್ಯಾಸಂಗ ಮತ್ತು ಸಂಶೋಧನೆಗಾಗಿ ಬೋಧಕ ಸಿಬ್ಬಂದಿಯನ್ನು ನಿಯೋಜಿಸುವುದು.
9) ಆಡಳಿತ ಮತ್ತು ಶೈಕ್ಷಣಿಕ ನೀತಿಗಳನ್ನು ಕಾಪಾಡುವುದು ಹಾಗೂ ಮೂಲಭೂತ ಸೌಕರ್ಯಗಳ ಇರುವಿಕೆ ಕುರಿತು ತಪಾಸಣೆ ನಡೆಸುವುದು.
ಕಾಲೇಜುಗಳು
ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಕಾಲೇಜುಗಳು
ಕಾಲೇಜುಗಳು
|
ಇಂಜಿನಿಯರಿಂಗ್
|
ಆರ್ಕಿಟೆಕ್ಚರ್
|
ಸರ್ಕಾರಿ
|
16
|
-
|
ಸರ್ಕಾರಿ ವಿಶ್ವವಿದ್ಯಾಲಯ
|
01
|
01
|
ಸರ್ಕಾರಿ VTU ಪ್ರಾದೇಶಿಕ
|
05
|
-
|
ಅನುದಾನಿತ
|
08
|
-
|
ಖಾಸಗಿ ವಿಶ್ವವಿದ್ಯಾಲಯ (ಅನುದಾನಿತ)
|
01
|
-
|
ಖಾಸಗಿ
|
147
|
29
|
ಖಾಸಗಿ ವಿಶ್ವವಿದ್ಯಾಲಯ
|
21
|
05
|
ಖಾಸಗಿ ಡೀಮ್ಡ್ ವಿಶ್ವವಿದ್ಯಾಲಯ
|
02
|
-
|
Total
|
201
|
35
|
Polytechnics
|
Number
|
Govt
|
Co-ed
|
93
|
Girls
|
8
|
Aided
|
General
|
40
|
Minority
|
2
|
Differently abled
|
1
|
Private
|
134
|
Total
|
278
|
Junior Technical Schools
|
Number
|
Govt
|
6
|
Private
|
8
|
Total
|
14
|
KIT ಗಳು - ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀ
ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ಸಂಸ್ಥೆಗಳ ಸಾಮರ್ಥ್ಯವನ್ನು IIT ಗಳಿಗೆ ಸಮಾನವಾಗಿ ನವೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ. 2022 ರ ಬಜೆಟ್ ಭಾಷಣದಲ್ಲಿ ಕರ್ನಾಟಕ ಸರ್ಕಾರವು 7 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಐಟಿ) ಆಗಿ ಮೇಲ್ದರ್ಜೆಗೆ ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಕೆಐಟಿಗೆ ಮೇಲ್ದರ್ಜೆಗೇರಿಸಲಾಗುವ ಸಂಸ್ಥೆಗಳು
- ಸರ್ಕಾರಿ ಶ್ರೀ ಕೃಷ್ಣರಾಜೇಂದ್ರ ರಜತ ಮಹೋತ್ಸವ ತಾಂತ್ರಿಕ ಸಂಸ್ಥೆ, ಬೆಂಗಳೂರು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕೆ.ಆರ್. ಪೇಟೆ
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಹಾಸನ
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಹಾವೇರಿ
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ತಳಕಲ್
ಕೋರ್ಸ್ಗಳು ಮತ್ತು ಪ್ರವೇಶಾತಿ
ಪಾಲಿಟೆಕ್ನಿಕ್ ಗಳು
|
Intake
|
Programs
|
Govt
|
Aided
|
Computer Science
|
4454
|
774
|
Electronics and Communication Engg
|
4476
|
1764
|
Electrical & Electronics Engg
|
1418
|
1195
|
Civil Engg
|
4158
|
1362
|
Mechanical Engg
|
4115
|
1542
|
Automobile Engg
|
1330
|
859
|
Others
|
3997
|
804
|
Total
|
23948
|
8300
|
ಇಂಜಿನಿಯರಿಂಗ್ ಕಾಲೇಜುಗಳು
|
Intake
|
Programs
|
Govt
|
Aided
|
Computer Science
|
960
|
1416
|
Electronics and Communication Engg
|
780
|
1236
|
Electrical & Electronics Engg
|
180
|
600
|
Civil Engg
|
780
|
1020
|
Mechanical Engg
|
720
|
1020
|
Automobile Engg
|
60
|
60
|
Others
|
250
|
2825
|
Total
|
3730
|
8177
|
ವಿದ್ಯಾರ್ಥಿಗಳು- ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು
ಪಾಲಿಟೆಕ್ನಿಕ್ ಗಳು
|
Govt
|
Aided
|
Year
|
Girls
|
Boys
|
Total
|
Girls
|
Boys
|
Total
|
2020-21
|
4093
|
10015
|
14108
|
1037
|
4332
|
5369
|
2021-22
|
4646
|
14169
|
18815
|
1043
|
5415
|
6458
|
2022-23*
|
6355
|
16598
|
22953
|
1336
|
6510
|
7846
|
* ಅಂದಾಜು ಡೇಟಾ (ಪ್ರವೇಶ ಅನುಮೋದನೆ ಪ್ರಕ್ರಿಯೆಯಲ್ಲಿದೆ)
|
Govt
|
Aided
|
Year
|
SC/ST
|
OBC
|
GM
|
Total
|
SC/ST
|
OBC
|
GM
|
Total
|
2020-21
|
3726
|
9813
|
569
|
14108
|
966
|
4022
|
381
|
5369
|
2021-22
|
4962
|
13253
|
600
|
18815
|
1210
|
3478
|
492
|
6458
|
2022-23
|
|
|
|
|
|
|
|
|
ಇಂಜಿನಿಯರಿಂಗ್ ಕಾಲೇಜುಗಳು
|
Govt
|
Aided
|
Year
|
Girls
|
Boys
|
Total
|
Girls
|
Boys
|
Total
|
2020-21
|
1168
|
1351
|
2519
|
1097
|
2043
|
3140
|
2021-22
|
1393
|
1696
|
3089
|
1095
|
1823
|
2918
|
2022-23*
|
|
|
|
|
|
|
* ಪ್ರವೇಶ ಅನುಮೋದನೆ ಪ್ರಕ್ರಿಯೆಯಲ್ಲಿದೆ
|
Govt
|
Aided
|
Year
|
SC/ST
|
OBC
|
GM
|
Total
|
SC/ST
|
OBC
|
GM
|
Total
|
2020-21
|
567
|
1757
|
195
|
2519
|
505
|
1985
|
650
|
3140
|
2021-22
|
679
|
1781
|
234
|
3089
|
534
|
1398
|
420
|
2918
|
2022-23
|
|
|
|
|
|
|
|
|
ಆಯುಕ್ತಾಲಯದ ಆಡಳಿತ ಮತ್ತು ಬೆಂಬಲ ಸಿಬ್ಬಂದಿ:
Cadre
|
Number
|
ಕಮಿಷನರ್
|
01
|
ನಿರ್ದೇಶಕ
|
01
|
ಹೆಚ್ಚುವರಿ ನಿರ್ದೇಶಕ
|
01
|
ಜಂಟಿ ನಿರ್ದೇಶಕ
|
04
|
ಉಪ ನಿರ್ದೇಶಕ
|
06
|
ಆಡಳಿತ ಅಧಿಕಾರಿ
|
01
|
ಸಹಾಯಕ ನಿರ್ದೇಶಕ
|
12
|
ರಿಜಿಸ್ಟ್ರಾರ್
|
06
|
ಸೂಪರಿಂಟೆಂಡೆಂಟ್
|
18
|
ಪ್ರ ದ ಸ
|
62
|
ದ್ವಿ ಧ ಸ
|
37
|
ಬೆರಳಚ್ಚುಗಾರ
|
12
|
ಚಾಲಕ
|
07
|
ಗುಂಪು-ಡಿ
|
55
|
ವಿದ್ಯಾರ್ಥಿ ಸೇವೆಗಳು
ಸೇವೆ / ವಿದ್ಯಾರ್ಥಿವೇತನ
|
SC/ST ವಿದ್ಯಾರ್ಥಿಗಳು - ಶುಲ್ಕ ಮರುಪಾವತಿ
|
ರಕ್ಷಣಾ ವಿದ್ಯಾರ್ಥಿವೇತನ
|
ಪ್ರತಿಭಾ ಪುರಸ್ಕಾರ (BPL ಕಾರ್ಡ್ ಹೋಲ್ಡರ್, PUC 80 %)
|
ಜೂನಿಯರ್ ಟೆಕ್ನಿಕಲ್ ಸ್ಕೂಲ್ (8ನೇ, 9ನೇ ಮತ್ತು 10ನೇ ತರಗತಿಗಳಿಗೆ ಸ್ಟೈಫಂಡ್)
|
HIV/ಕುಷ್ಠರೋಗ ಪೀಡಿತ ಪಾಲಕರು ಅಥವಾ ಪೀಡಿತ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ.
|
ವಿದ್ಯಾರ್ಥಿನಿಯರಿಗೆ ಉಚಿತ ಬೋಧನಾ ಶುಲ್ಕ
|
ಸಕಾಲ / ಸೇವಾಸಿಂಧು ಸೇವೆಗಳು
- ಮೂಲ ಡಿಪ್ಲೊಮಾ ಪ್ರಮಾಣಪತ್ರಕ್ಕಾಗಿ ಅರ್ಜಿ
- ಉತ್ತರ ಸ್ಕ್ರಿಪ್ಟ್ಗಳ ಫೋಟೋಕಾಪಿಗಾಗಿ ಅರ್ಜಿ
- ಉತ್ತರ ಸ್ಕ್ರಿಪ್ಟ್ಗಳ ಮರುಮೌಲ್ಯಮಾಪನಕ್ಕಾಗಿ ಅರ್ಜಿ
- ನಕಲಿ ಡಿಪ್ಲೊಮಾ ಪ್ರಮಾಣಪತ್ರಕ್ಕಾಗಿ ಅರ್ಜಿ
- ನಕಲಿ ಡಿಪ್ಲೊಮಾ ಮಾರ್ಕ್ಸ್ ಕಾರ್ಡ್ಗಳಿಗಾಗಿ ಅರ್ಜಿ
- ಸಿಲಬಸ್ ಪ್ರಮಾಣೀಕರಣಕ್ಕಾಗಿ ಅರ್ಜಿ
- ಡಿಪ್ಲೊಮಾ ಮಾರ್ಕ್ಸ್ ಕಾರ್ಡ್ / ಪ್ರಮಾಣಪತ್ರದ ಪರಿಶೀಲನೆಗಾಗಿ ಅರ್ಜಿ
- ವಲಸೆ ಪ್ರಮಾಣಪತ್ರಕ್ಕಾಗಿ ಅರ್ಜಿ • ಸರಿಪಡಿಸಿದ ಡಿಪ್ಲೊಮಾ ಪ್ರಮಾಣಪತ್ರಕ್ಕಾಗಿ ಅರ್ಜಿ
- ಸರಿಪಡಿಸಿದ ಡಿಪ್ಲೊಮಾ ಮಾರ್ಕ್ಸ್ ಕಾರ್ಡ್ಗಾಗಿ ಅರ್ಜಿ • ಅರ್ಹತಾ ಪ್ರಮಾಣಪತ್ರದ (SSLC) ವಿತರಣೆಗಾಗಿ ಅರ್ಜಿ
- ಅರ್ಹತಾ ಪ್ರಮಾಣಪತ್ರ (ಡಿಪ್ಲೊಮಾ) ನೀಡಿಕೆಗಾಗಿ ಅರ್ಜಿ • ಕನ್ಸಾಲಿಡೇಟೆಡ್ ಮಾರ್ಕ್ಸ್ ಕಾರ್ಡ್ನ ವಿತರಣೆ
IPGRS - ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ
ಪಾಲಿಟೆಕ್ನಿಕ್ಗಳಿಗೆ C-20 ಪಠ್ಯಕ್ರಮ- ಪ್ರಮುಖ ಲಕ್ಷಣಗಳು
ವಿದ್ಯಾರ್ಥಿಗಳಿಗೆ ಇತರ ಉಪಕ್ರಮಗಳು
IIIC - ಇಂಡಸ್ಟ್ರಿ ಇನ್ಸ್ಟಿಟ್ಯೂಟ್ ಇಂಟರಾಕ್ಟಿವ್ ಸೆಲ್
ಕಲಿಕೆಯ ಸಂಪನ್ಮೂಲ ಅಭಿವೃದ್ಧಿ ಕೇಂದ್ರ (LRDC)
ಕಾರ್ಪೊರೇಟ್ ಔಟ್ರೀಚ್ ಮತ್ತು ಪ್ಲೇಸ್ಮೆಂಟ್ Corporate Outreach and Placement
ಅವಳಿ ಕಾರ್ಯಕ್ರಮ Twinning Program
ಡಿಜಿಟಲ್ ಉಪಕ್ರಮಗಳು-
- ಇ ಆಫೀಸ್
- EMIS- ಆನ್ಲೈನ್ ಮಾಹಿತಿ ವ್ಯವಸ್ಥೆ, ವರ್ಗಾವಣೆ ಕೌನ್ಸೆಲಿಂಗ್
- ವೆಬ್ ವಿಷಯ ನಿರ್ವಹಣಾ ವ್ಯವಸ್ಥೆ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಪಾಲಿಟೆಕ್ನಿಕ್ಗಳಿಗಾಗಿ ದ್ವಿಭಾಷಾ ವೆಬ್ಸೈಟ್
- ಸಿಬ್ಬಂದಿಗಾಗಿ ಆನ್ಲೈನ್ ಕುಂದುಕೊರತೆ ಪರಿಹಾರ ವ್ಯವಸ್ಥೆ
- ಡಿಜಿಟಲ್ ಕಲಿಕೆ- KLMS, ಸ್ಮಾರ್ಟ್ ತರಗತಿಗಳು, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳು ಮತ್ತು ಟ್ಯಾಬ್ಲೆಟ್ಗಳು
- YouTube ಚಾನಲ್Faculty Capacity Building -
ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು
- ಇಂಡಕ್ಷನ್ ಕಾರ್ಯಕ್ರಮಗಳು, 15 ದಿನಗಳು
- ಉನ್ನತ ಶಿಕ್ಷಣಕ್ಕೆ ಸಿಬ್ಬಂದಿಯನ್ನು ನಿಯೋಜಿಸುವುದು
- ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿಬ್ಬಂದಿಯನ್ನು ನಿಯೋಜಿಸುವುದು
- FPI- ಹಣಕಾಸಿನ ನೀತಿ ಸಂಸ್ಥೆ
- ATI- ಆಡಳಿತ ತರಬೇತಿ ಸಂಸ್ಥೆEmployee related initiatives
- ವರ್ಗಾವಣೆ ನಿಯಂತ್ರಣ ಕಾಯಿದೆ
- ಬೋಧಕ ಸಿಬ್ಬಂದಿಗೆ ಆನ್ಲೈನ್ ವರ್ಗಾವಣೆ ಕೌನ್ಸೆಲಿಂಗ್
ಕಾಲೇಜು ಕಟ್ಟಡ ಮಾಹಿತಿ
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳ ಕಟ್ಟಡ ಕಾಮಗಾರಿ/ ಜಮೀನು ಮಂಜೂರಾತಿ ವಿವರ
ಕ್ರಮ ಸಂಖ್ಯೆ |
ಸಂಸ್ಥೆ |
ಒಟ್ಟು ಮಂಜೂರಾಗಿರುವ ಸಂಸ್ಥೆಗಳು |
ಸ್ವಂತ ಜಮೀನು ಹಾಗೂ ಕಟ್ಟಡ ಹೊಂದಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು |
ಕಟ್ಟಡ ಕಾಮಗಾರಿ ಪ್ರಗತಿಯಲ್ಲಿರುವ ಸಂಸ್ಥೆಗಳು |
ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಬೇಕಿರುವ ಸಂಸ್ಥೆಗಳು |
ಜಮೀನು/ನಿವೇಶನ ಪಡೆಯುವ ಪ್ರಕ್ರಿಯೆಯಲ್ಲಿರುವ ಸಂಸ್ಥೆಗಳು |
ಒಟ್ಟಾರೆ |
1 |
ಸರ್ಕಾರಿ ಪಾಲಿಟೆಕ್ನಿಕ್ಗಳು |
120 |
100 |
11 |
5 |
4 |
120 |
2 |
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು |
19 |
16 |
2 |
0 |
1 |
19 |
ಒಟ್ಟು |
139 |
116 |
13 |
5 |
5 |
139 |
For further details, click Government Polytechnics and Government Engineering Colleges
ಹಾಸ್ಟೆಲ್ ಮಾಹಿತಿ
For further details, click Government Polytechnics and Government Engineering Colleges