ಅಭಿಪ್ರಾಯ / ಸಲಹೆಗಳು

ತಾಂತ್ರಿಕ ಪರೀಕ್ಷಾ ಮಂಡಳಿ

ಪರೀಕ್ಷಾ ವಿಭಾಗ

 

ಪರಿಚಯ

 

ತಾಂತ್ರಿಕ ಶಿಕ್ಷಣ ಇಲಾಖೆಯು ಕರ್ನಾಟಕದ ತಾಂತ್ರಿಕ ಶಿಕ್ಷಣ ಕ್ಷ್ರೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿದೆ. ಇದರ ಪ್ರಾಥಮಿಕ ಕಾರ್ಯವು ತಾಂತ್ರಿಕ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವುದು, ಅರ್ಹ ಅಭ್ಯರ್ಥಿಗಳಿಗೆ ತಾಂತ್ರಿಕ ಪರೀಕ್ಷಾ ಮಂಡಳಿಯು ಡಿಪ್ಲೋಮಾ/ಪೋಸ್ಟ್ ಡಿಪ್ಲೋಮಾ/ಟೈಲರಿಂಗ್ ಕೋರ್ಸ್ ಗಳಿಗೆ ಪರೀಕ್ಷೆ ನಡೆಸಿ, ಅರ್ಹ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡುತ್ತದೆ. ಇಲಾಖೆಯ ನಿರ್ದೇಶಕಕರು ಪರೀಕ್ಷಾ ಮಂಡಳಿಯ ಆಧ್ಯಕ್ಷರಾಗಿರುತ್ತಾರೆ ಮತ್ತು ಕಾರ್ಯದರ್ಶಿಯವರು ಮಂಡಳಿಯ ಎಲ್ಲಾ ಇತರ ಚಟುವಟಿಕೆಗಳನ್ನು ನಡೆಸುತ್ತಾರೆ. ಮಂಡಳಿಯು ಎಲ್ಲಾ ಸಂಸ್ಥೆಗಳ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸ ಬೇಕಾಗಿರುವುದರಿಂದ ಪರೀಕ್ಷೆಯಲ್ಲಿ ಏಕರೂಪತೆಯನ್ನು ತರಲು 1952 ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಅನ್ನು ಸ್ಥಾಪಿಸಲಾಯಿತು. ಇದನ್ನು ಮುಂದೆ " ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ " (BTE)ಎಂದು ಪುನರ್ ನಾಮಕರಣ ಮಾಡಲಾಯಿತು.
 

ಸೇವೆಗಳು

 

1) ಡಿಪ್ಲೋಮಾ ಪ್ರಮಾಣ ಪತ್ರ ವಿತರಣೆ

 

ವಿದ್ಯಾರ್ಥಿಗಳು ಡಿಪ್ಲೋಮಾ ಪರೀಕ್ಷೆ ಫಲಿತಾಂಶ ಪ್ರಕಟವಾದ ಮೂರು ತಿಂಗಳ ನಂತರ ಡಿಪ್ಲೋಮಾ ಪ್ರಮಾಣ ಪತ್ರವನ್ನು ಪಡೆಯಲು ಅರ್ಹತೆ ಪಡೆಯುತ್ತಾರೆ. ಸೆಮಿಸ್ಟರ್ ಯೋಜನೆ ಅಭ್ಯರ್ಥಿಗಳಿಗೆ ಮಾರ್ಕ್ಸ್ ಕಾರ್ಡ್ ಏಕೀಕರಣ (Consolidation of Marks Card) ಇರುವುದಿಲ್ಲ. ದ್ವಿಭಾಗದ ಅಂಕಪಟ್ಟಿ ಪಡೆಯಲು ಪ್ರಾಂಶುಪಾಲರ ಮುಖಾಂತರ ರೂ.20/- ಸ್ಟಾಂಪ್ ಪೇಪರ್ ಆಫೀಡವಿಟ್ ಯೊಂದಿಗೆ ಸ.ಆ.ಇಡಿ(11) ಟಿ‌ಪಿ‌ಇ 2007 ಪ್ರಕಾರ ನಿಗದಿತ ಶುಲ್ಕ ಪಾವತಿಸಿ ಕಳುಹಿಸಬೇಕು.
 

2) ಅಂಕ ಪಟ್ಟಿ ತಿದ್ದುವಿಕೆ

 

ಸೆಮಿಸ್ಟರ್ ಸ್ಕೀಮ್ ಅಭ್ಯರ್ಥಿಗಳಿಗೆ ಯಾವುದೇ ಮಾರ್ಕ್ಸ್ ಕಾರ್ಡ್ ತಿದ್ದುಪಡಿಗೆ ಹೊಸ ಅಂಕ ಪಟ್ಟಿ ನೀಡಲಾಗುತ್ತದೆ. ಅಭ್ಯರ್ಥಿಗಳ ಕೋರಿಕೆ ಪತ್ರ , ಮೂಲ ಅಂಕಪಟ್ಟಿ ಮತ್ತು ನಿಗದಿತ ಶುಲ್ಕ ಸ್ವೀಕರಿಸಿದ ನಂತರ ಹೊಸದಾದ ಅಂಕಪಟ್ಟಿ ನೀಡಲಾಗುವುದು.

 

3) ಡೂಪ್ಲಿಕೇಟ್ ಡಿಪ್ಲೋಮಾ ಪ್ರಮಾಣ ಪತ್ರದ ವಿತರಣೆ

 

ಅಭ್ಯರ್ಥಿಗೆ ಡೂಪ್ಲಿಕೇಟ್ ಡಿಪ್ಲೋಮಾ ಪ್ರಮಾಣ ಪತ್ರವನ್ನು ಈ ಕೆಳಗಿನ ದಾಖಲೆಗಳನ್ನು ನೀಡಿದಲ್ಲಿ ಕೊಡಲಾಗುವುದು.

1) ಸರ್ಕಾರಿ/ಅನುದಾನಿತ ಸಂಸ್ಥೆಯಲ್ಲಿ ಟ್ರೆಷರಿಯಲ್ಲಿ ಅಗತ್ಯ ಶುಲ್ಕ ಪಾವತಿಸಿದ ರಸೀತಿ.

2) ಅಗತ್ಯ ವಿಷಯವನ್ನು ರೂ.20 ಸ್ಟ್ಯಾಂಪ್ ಪೇಪರ್ ಮೇಲೆ ಛಾಪಿಸುವುದು.

3) ಡಿಪ್ಲೋಮಾ ಪ್ರಮಾಣ ಪತ್ರವು ಕಳೆದು ಹೋದ/ಕಳವು ಮಾಡಿದ ಪ್ರದೇಶದ ಮೂಲ ಪೊಲೀಸ್ ದೂರು.

4) ಡಿಪ್ಲೋಮಾ ಪ್ರಮಾಣ ಪತ್ರವು ಕಳೆದ ಬಗ್ಗೆ ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಣೆ.

5) ಅಭ್ಯರ್ಥಿ ಮತ್ತು ಪ್ರಾಂಶುಪಾಲರ ಸಹಿಯೊಂದಿಗೆ ಅರ್ಜಿ ಸಲ್ಲಿಸಬೇಕು.

ಗಮನಿಸಿ: ಮೂಲ ಡಿಪ್ಲೋಮಾ ಪ್ರಮಾಣ ಪತ್ರವು ಪೊಲೀಸ್ ದೂರು/ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಣೆಯಾದ 30 ದಿನಗಳ ನಂತರ ಡೂಪ್ಲಿಕೇಟ್ ಡಿಪ್ಲೋಮಾ ಪ್ರಮಾಣ ಪತ್ರವನ್ನು ಪಡೆಯಲು ಅರ್ಹರಾಗಿರುತ್ತಾರೆ.

 

ಪರೀಕ್ಷಾ ಶುಲ್ಕ ವಿವರಣೆ 

 

1.ಪೂರ್ಣಾವಧಿ ಡಿಪ್ಲೋಮಾ ಕೋರ್ಸ್ ನ ಪರೀಕ್ಷಾ ಶುಲ್ಕ
I/II/III ವರ್ಷದ ಪೂರ್ಣ ಪರೀಕ್ಷೆಗೆ
600-00
ಒಂದು ವಿಷಯಕ್ಕೆ
200-00
ಎರಡು ವಿಷಯಕ್ಕೆ
200-00
ಮೂರು ವಿಷಯಕ್ಕೆ
200-00
2.ಪೋಸ್ಟ್ ಡಿಪ್ಲೋಮಾ ಕೋರ್ಸ್
ಪೂರ್ಣ ಪರೀಕ್ಷೆಗೆ
700-00
ಒಂದು ವಿಷಯಕ್ಕೆ
400-00
ಎರಡು ವಿಷಯಕ್ಕೆ
400-00
ಮೂರು ವಿಷಯಕ್ಕೆ
400-00
3.ಲೈಬ್ರರಿ ಸೈನ್ಸ್ ಡಿಪ್ಲೋಮಾ
ಪ್ರಥಮ ಸೆಮಿಸ್ಟರ್ ಪೂರ್ಣ ಪರೀಕ್ಷೆಗೆ
300-00
ಎರಡನೆ ಸೆಮಿಸ್ಟರ್ ಪೂರ್ಣ ಪರೀಕ್ಷೆಗೆ
300-00
ಮೂರನೇ ಸೆಮಿಸ್ಟರ್ ಪೂರ್ಣ ಪರೀಕ್ಷೆಗೆ
300-00
ನಾಲ್ಕನೇ ಸೆಮಿಸ್ಟರ್ ಪೂರ್ಣ ಪರೀಕ್ಷೆಗೆ
300-00
ಒಂದು ವಿಷಯಕ್ಕೆ
200-00
ಎರಡು ವಿಷಯಕ್ಕೆ
200-00
ಮೂರು ವಿಷಯಕ್ಕೆ
300-00
4.ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್/ಸೌಂಡ್ ರೆಕಾರ್ಡಿಂಗ್/ಫಿಲ್ಮ್ & ಟಿ .ವಿ ಡಿಪ್ಲೋಮಾ
I /II/III/IV/V/VI ಸೆಮಿಸ್ಟರ್ ಗಳಿಗೆ
300-00
ಒಂದು ವಿಷಯಕ್ಕೆ
200-00
ಎರಡು ವಿಷಯಕ್ಕೆ
200-00
ಮೂರು ವಿಷಯಕ್ಕೆ
300-00
5.ಪಾಲಿಮರ್ ಟೆಕ್ನಾಲಜಿ & ಲೆದರ್ ಟೆಕ್ನಾಲಜಿ ಡಿಪ್ಲೋಮಾ
1 ಮತ್ತು 2 ನೇ ಸೆಮಿಸ್ಟರ್ ಗಳಿಗೆ
600-00
3ನೇ ಸೆಮಿಸ್ಟರ್
300-00
4 ಸೆಮಿಸ್ಟರ್
300-00
5 ಸೆಮಿಸ್ಟರ್
300-00
6 ಸೆಮಿಸ್ಟರ್
300-00
ಒಂದು ವಿಷಯಕ್ಕೆ
200-00
ಎರಡು ವಿಷಯಕ್ಕೆ
200-00
ಮೂರು ವಿಷಯಕ್ಕೆ
300-00
6.COP ಮತ್ತು MPEC ಸ್ಕೀಮ್ ಡಿಪ್ಲೋಮಾ
1 ನೇ ಸೆಮಿಸ್ಟರ್ ಗಳಿಗೆ
300-00
2 ನೇ ಸೆಮಿಸ್ಟರ್ ಗಳಿಗೆ
300-00
3ನೇ ಸೆಮಿಸ್ಟರ್
300-00
4 ಸೆಮಿಸ್ಟರ್
300-00
5 ಸೆಮಿಸ್ಟರ್
300-00
6 ಸೆಮಿಸ್ಟರ್
300-00
ಒಂದು ವಿಷಯಕ್ಕೆ
200-00
ಎರಡು ವಿಷಯಕ್ಕೆ
200-00
ಮೂರು ವಿಷಯಕ್ಕೆ
300-00
7.External ಡಿಪ್ಲೋಮಾ
I/II/III ವರ್ಷದ ಪೂರ್ಣ ಪರೀಕ್ಷೆಗೆ
600-00
ಒಂದು ವಿಷಯಕ್ಕೆ
200-00
ಎರಡು ವಿಷಯಕ್ಕೆ
200-00
ಮೂರು ವಿಷಯಕ್ಕೆ
200-00
8.ಟೇಲರಿಂಗ್ ಎರಡು ವರ್ಷದ ಸರ್ಟಿಫಿಕೇಟ್ ಕೋರ್ಸ್
ಮೊದಲನೆ ವರ್ಷಕ್ಕೆ
200-00
ಎರಡನೆ ವರ್ಷಕ್ಕೆ
200-00
ಒಂದು ವಿಷಯಕ್ಕೆ
150-00
ಎರಡು ವಿಷಯಕ್ಕೆ
150-00
ಮೂರು ವಿಷಯಕ್ಕೆ
200-00
9.ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್
ಪೂರ್ಣ ಪರೀಕ್ಷೆಗೆ
100-00
ಒಂದು ವಿಷಯಕ್ಕೆ
50-00
ಎರಡು ವಿಷಯಕ್ಕೆ
50-00

 

ಸಕಾಲ

"ಸಕಾಲ" ಕಾರ್ಯಕ್ರಮವನ್ನು ಆಯುಕ್ತಾಲಯದಲ್ಲಿ ದಿನಾಂಕ 16-08-2013 ರಿಂದ ಅಳವಡಿಸಲಾಗಿದೆ. ಈ ಕೆಳಕಂಡ ಸೇವೆಗಳನ್ನು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಿಂದ ಪಡೆಯಬಹುದಾಗಿದೆ. ಸದರಿ ಸೇವೆಗಳ ವೇಳಾಪಟ್ಟಿ ಮತ್ತು ಸಂಬಂದಿಸಿದ ವಿಳಾಸಗಳನ್ನು ಇಲಾಖೆಯ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗಿದೆ.

1. ಡಿಪ್ಲೋಮಾ ಪ್ರಮಾಣ ಪತ್ರ ನೀಡುವುದು.

2. ಡಿಪ್ಲೋಮಾ ಅಂಕ ಪಟ್ಟಿ ನೀಡುವುದು.

3. ಅಂಕ ಪಟ್ಟಿ ತಿದ್ದುಪಡಿ /ಕ್ರೋಡೀಕೃತ ಅಂಕಪಟ್ಟಿ ನೀಡುವುದು.

4. ಅರ್ಹ ಪ್ರಮಾಣ ಪತ್ರ ನೀಡುವುದು.

5. ವಲಸೆ ಪ್ರಮಾಣ ಪತ್ರ ನೀಡುವುದು.

6. ಪಠ್ಯಕ್ರಮ ದೃಡೀಕರಿಸಿ ನೀಡುವುದು.

7. ಅಂಕಪಟ್ಟಿ /ಡಿಪ್ಲೋಮಾ ಪ್ರಮಾಣ ಪತ್ರಗಳ ನೈಜತೆ ಪ್ರಮಾಣ ಪತ್ರ ನೀಡುವುದು.

8. ಉತ್ತರ ಪತ್ರಿಕೆ ಫೋಟೋ ಪ್ರತಿ ನೀಡುವುದು.

9. ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಮಾಡುವುದು.

10. ಡೂಪ್ಲಿಕೇಟ್ ಅಂಕಪಟ್ಟಿ ನೀಡುವುದು.

 

 

ಇತ್ತೀಚಿನ ನವೀಕರಣ​ : 02-01-2021 04:01 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080