ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತಾಲಯದ ಮುಖ್ಯ ಶಾಖೆಗಳು
ಆಡಳಿತ ಮತ್ತು ಸಿಬ್ಬಂದಿ ಶಾಖೆ
1) ಆಯುಕ್ತಾಲಯ ಮತ್ತು ಸರ್ಕಾರಿ/ಖಾಸಗಿ ಅನುದಾನಿತ ಪಾಲಿಟೆಕ್ನಿಕ್ ಗಳ , ಸರ್ಕಾರಿ/ಖಾಸಗಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಆಡಳಿತಾತ್ಮಕ ವಿಷಯಗಳ ಸಮರ್ಪಕ ನಿರ್ವಹಣೆ.
2) ಆಡಳಿತಾತ್ಮಕ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು.
3) ಎಲ್ ಟಿ ಸಿ /ಹೆಚ್ ಟಿ ಸಿ/ಜಿಪಿ ಎಫ್ /ವೈದ್ಯಕೀಯ ಸಂಬಂಧಿ ಬಿಲ್ಲುಗಳ ಮಂಜೂರಾತಿ ನೀಡುವುದು.
4) ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಕಾಲ - ಕಾಲಕ್ಕೆ ಪರಿಷ್ಕರಿಸುವುದು.
5) ಬೋಧಕ/ ಬೋಧಕೇತರ ಸಿಬ್ಬಂದಿಗಳ ನೇಮಕಾತಿ/ನಿಯೋಜನೆ ಪ್ರಕ್ರಿಯೆ ನಿರ್ವಹಿಸುವುದು.
6) ಬೋಧಕ/ಬೋಧಕೇತರ ಸಿಬ್ಬಂದಿಯ ಸೇವಾಜೇಷ್ಟತೆ ಪಟ್ಟಿ ಸಿದ್ದಪಡಿಸಿ , ಮುಂಬಡ್ತಿ ನೀಡುವ ಕಾರ್ಯನಿರ್ವಹಿಸುವುದು.
7) ಸರ್ಕಾರಿ /ಅನುದಾನಿತ ಸಂಸ್ಥೆಗಳ ಸಿಬ್ಬಂದಿಯವರ ನಿವೃತ್ತಿ ವೇತನ ಇತ್ಯರ್ಥಗೊಳಿಸುವುದು.
ಶೈಕ್ಷಣಿಕ ಶಾಖೆ
1) ಪಾಲಿಟೆಕ್ನಿಕ್ ಗಳ ಹಾಗೂ ಸಿ .ಇ .ಟಿ . ಮೂಲಕ ಮೊದಲನೇ ವರ್ಷದ ಬಿ . ಇ. ಪದವಿ ಪ್ರವೇಶಾತಿಗಾಗಿ ಸೀಟ್ ಮ್ಯಾಟ್ರಿಕ್ಸ್ ತಯಾರಿಸುವುದು.
2) ಪಾಲಿಟೆಕ್ನಿಕ್ ಗಳ ಪ್ರವೇಶಾತಿಗಾಗಿ ಮಾಹಿತಿ ,ಮಾರ್ಗಸೂಚಿಗಳನ್ನು ನೀಡುವುದು ,ಪ್ರವೇಶಾತಿಗೆ ಸಂಬಂಧಿ ಅವಶ್ಯವಿರುವ ನಿಯಮಾವಳಿಗಳನ್ನು ಕಾಲ ಕಾಲಕ್ಕೆ ಪರಿಷ್ಕರಣೆ ಮಾಡುವುದು.
3) ಪಾಲಿಟೆಕ್ನಿಕ್ ಗಳ ಕಾರ್ಯಕ್ರಮಗಳ ದಿನ-ದರ್ಶಿಕೆಯ ವೇಳಾ ಪಟ್ಟಿ ತಯಾರಿಸುವುದು.
4) ಡಿಪ್ಲೋಮಾ ಪದವೀಧರರಿಗೆ ಸಿಇಟಿ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆ ಮುದ್ರಿಸುವುದು , ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವುದು , ಮೆರಿಟ್ ಲಿಸ್ಟ್ ತಯಾರಿಸಿ ಎರಡನೇ ವರ್ಷದ ಬಿ .ಇ . ಪದವಿ ಪ್ರವೇಶಕ್ಕಾಗಿ ಸಂದರ್ಶನ ನಡೆಸುವ ಕಾರ್ಯ ನಿರ್ವಹಿಸುವುದು.
5) ಪಾಲಿಟೆಕ್ನಿಕ್ ಗಳಿಗೆ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿಗೆ ಹೊರನಾಡು ಕನ್ನಡಿಗ ,ಗಡಿನಾಡು ಕನ್ನಡಿಗ ,ಭಾರತ ಸರ್ಕಾರದ ಮೀಸಲಾತಿ ಮುಂತಾದ ವಿವಿಧ ಮೀಸಲಾತಿಗಳ ಪ್ರವೇಶಾತಿ ಪ್ರಕ್ರಿಯೆಯನ್ನು ನಡೆಸುವುದು.
6) ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಹೊರತರಲು ರಾಜ್ಯಮಟ್ಟದ ತಾಂತ್ರಿಕ ವಸ್ತು ಪ್ರದರ್ಶನ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುವುದು.
ಲೆಕ್ಕ-ಪತ್ರ ಶಾಖೆ
1) ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು , ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ,ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ ಗಳಿಗೆ ಯೋಜನೇತರ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಅನುದಾನ ಬಿಡುಗಡೆಗೊಳಿಸುವುದು.
2) ಅಪೆಂಡಿಕ್ಸ್ - ಬಿ ಆಯವ್ಯಯ ಅಂದಾಜು ಪಟ್ಟಿ , ವೆಚ್ಚ ಹಾಗೂ ಆದಾಯಗಳ ಅಂದಾಜು ಪಟ್ಟಿಗಳನ್ನು ತಯಾರಿಸುವುದು . ಎಚ್ ಬಿ ಎ /ಹೆಚ್ ಪಿ ಎ /ಖರೀದಿ ಮುಂಗಡಗಳು ,ವೈದ್ಯಕೀಯ ವೆಚ್ಚ ಮರುಪಾವತಿ,ಸಾಲ ಮುಂತಾದವುಗಳನ್ನು ಮಂಜೂರು ಮಾಡುವುದು . ಎಲ್ಲಾ ಸರ್ಕಾರಿ /ಅನುದಾನಿತ ಇಂಜಿನಿಯರಿಂಗ್ ಹಾಗೂ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳ ಲೆಕ್ಕಪತ್ರ ತಪಾಸಣೆ ನಡೆಸುವುದು.
3) ಅನುದಾನಿತ ಸಂಸ್ಥೆಗಳ ಬಿಲ್ಲುಗಳಿಗೆ , ವಿದ್ಯಾರ್ಥಿವೇತನ , ಎನ್ ಡಿ ಸಿ ಮತ್ತು ಎಸಿ ಬಿಲ್ಲುಗಳನ್ನು ಪರಿಶೀಲಿಸಿ ಮೇಲು ರುಜು ಮಾಡುವುದು.
ಅಭಿವೃದ್ಧಿ ಶಾಖೆ
1) ಹೊಸ ಇಂಜಿನಿಯರಿಂಗ್ ಕಾಲೇಜುಗಳು /ಪಾಲಿಟೆಕ್ನಿಕ್ ಗಳು/ ಕಿರಿಯ ತಾಂತ್ರಿಕ ಶಾಲೆಗಳನ್ನು ಪ್ರಾರಂಭಿಸುವುದು.
2) ಯೋಜನಾ ಕಾರ್ಯಕ್ರಮಗಳಡಿಯಲ್ಲಿ ಆಯವ್ಯಯ ಮತ್ತು ಅನುಬಂಧ -ಬಿ ತಯಾರಿಸುವುದು .
3) ಅಲ್ಪ ಸಂಖ್ಯಾತ ಮಾನ್ಯತೆಯನ್ನು ಖಾಸಗಿ ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್ ಗಳಿಗೆ ನೀಡುವುದು .
4) ಮಾಡ್ ರೋಬ್ಸ್ ಕಾರ್ಯಕ್ರಮಗಳ ನಿರ್ವಹಣೆ.
5) ಎ ಐ ಸಿ ಟಿ ಇ ಮಾನ್ಯತೆ ವಿಸ್ತರಣೆಗಾಗಿ ಎಲ್ಲಾ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ವೀಕ್ಷಿಸಲು ತಪಾಸಣೆ ನಡೆಸುವುದು.
6) ಇನ್ನಿತರ ಅಭಿವೃದ್ಧಿಗೆ ಸಂಭಂಧಿಸಿದಂತೆ ಕಾರ್ಯ ನಿರ್ವಹಿಸುವುದು.
ಅಪ್ರೆಂಟೀಸ್ ತರಬೇತಿ ಯೋಜನಾ ಶಾಖೆ
1) ಕೇಂದ್ರೀಕೃತ ಅಪ್ರೆಂಟೀಸ್ ಕಾರ್ಯಕ್ರಮಗಳನ್ನು ನಡೆಸುವುದು.
2) ಆಯ್ಕೆ ಪ್ರಕ್ರಿಯೆ ಮತ್ತು ಸ್ಟೈಫಂಡ್ ನೀಡುವುದು.
3) ಅಪ್ರೆಂಟೀಸ್ ಕಾರ್ಯಕ್ರಮಗಳನ್ನು ನಡೆಸುವ ಸಂಬಂಧ ಉದ್ದಿಮೆಗಳ ಜೊತೆಗೆ ಸಂಪರ್ಕ ಬೆಳೆಸುವುದು.
4) ಸಮುದಾಯ ಪಾಲಿಟೆಕ್ನಿಕ್ ಗಳ ಯೋಜನೆಗಳು.
5) ಉದ್ಯೋಗ ಮಾಹಿತಿ ಕಾರ್ಯಕ್ರಮಗಳು.
6) ಅಭಿವೃದ್ಧಿ ಕಾರ್ಯಕರ್ಮಗಳನ್ನು ಪರಿವೀಕ್ಷಣೆ ಮಾಡುವುದು.
7) ಔದ್ಯೋಗಿಕ ತಿಳುವಳಿಕೆ ಕಾರ್ಯಕ್ರಮಗಳು.
8) ಉದ್ದಿಮೆಗಳ ಮತ್ತು ತಾಂತ್ರಿಕ ಸಂಸ್ಥೆಗಳ ಸಂಬಂಧ ವೃದ್ಧಿ ಕೋಶ.
9) ಉದ್ಯೋಗ ಮಾಹಿತಿ ಕೋಶ.
ದಾಸ್ತಾನು ಮತ್ತು ಖರೀದಿ ಶಾಖೆ
1) ಪ್ರಯೋಗಾಲಯ ಉಪಕರಣಗಳು ,ಕಂಪ್ಯೂಟರ್ ಯಂತ್ರೋಪಕರಣಗಳು ಹಾಗೂ ಇನ್ನಿತರೆ ಸಲಕರಣೆಗಳು ,ಪೀಠೋಪಕರಣಗಳು , ಪುಸ್ತಕಗಳು ಹಾಗೂ ಇನ್ನಿತರೆ ಶೈಕ್ಷಣಿಕ ಸಂಬಂಧಿಸಿದ ವಸ್ತುಗಳನ್ನು ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ನಿಯಮಾನುಸಾರ ಖರೀದಿ ಹಾಗೂ ಅನುಮೋದನೆ ಮಾಡುವುದು.
2) ದರ ಒಪ್ಪಂದ ಅನುಮೋದನೆ ಮಾಡುವುದು.
3) ಪ್ರಯೋಗಾಲಯ ಉಪಕರಣ , ಕಂಪ್ಯೂಟರ್ ಯಂತ್ರೋಪಕರಣ ಮತ್ತು ಇತರೆ ಪರಿಕರಗಳ ವಾರ್ಷಿಕ ನಿರ್ವಹಣೆ ಮತ್ತು ರಿಪೇರಿ ಕೆಲಸ ಕಾರ್ಯಗಳನ್ನು ನಿಯಮಾನುಸಾರ ನಿರ್ವಹಿಸುವುದು.
ಕಟ್ಟಡ ಶಾಖೆ
1) ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಗಳ ಕಟ್ಟಡ , ಕಾಂಪೌಂಡ್ ನಿರ್ಮಾಣ ಕಾಮಗಾರಿ , ಕಟ್ಟಡ - ವಿಸ್ತಾರಗೊಳಿಸುವುದು ಮತ್ತು ಕಟ್ಟಡ -ದುರಸ್ಥಿ ಕಾಮಗಾರಿಗಳನ್ನು ನಿರ್ವಹಿಸುವುದು.
2) ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಗಳ ಹಾಗೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಯೋಜನೆ ಹಾಗೂ ಯೋಜನೇತರ ಅಡಿಯಲ್ಲಿನ ಅಂದಾಜು ಪಟ್ಟಿಗಳನ್ನು ಪರಿಶೀಲಿಸಿ ಮೇಲು ರುಜು ಮಾಡುವುದು.
3) ನೀರು ಮತ್ತು ವಿದ್ಯುತ್ ನಿರ್ವಹಣೆ ಹಾಗೂ ಅವುಗಳ ಬಿಲ್ಲುಗಳನ್ನು ಪಾವತಿಸುವುದು.
4) ಆಯುಕ್ತಋ,ನಿರ್ದೇಶಕರು, ಜಂಟಿ ನಿರ್ದೇಶಕರುಗಳು ಹಾಗೂ ಆಡಳಿತಾಧಿಕಾರಿಗಳಿಗೆ ದೂರವಾಣಿ ಸಂಪರ್ಕ ಕಲ್ಪಿಸಿ ನಿರ್ವಹಿಸುವುದು.
ಪಠ್ಯಕ್ರಮ ಅಭಿವೃದ್ಧಿ ವಿಭಾಗ
1) ಪಠ್ಯಕ್ರಮದ ವಿನ್ಯಾಸ ಮತ್ತು ವಿಮರ್ಶೆ.
2) ಉದ್ಯಮದ ಅಗತ್ಯತೆಗಳ ಪ್ರಕಾರ ಪಠ್ಯಕ್ರಮ.
3) ಬೋಧನೆ ಮತ್ತು ಕಲಿಕೆಯ ಕೌಶಲ್ಯಗಳನ್ನು ಸುಧಾರಿಸುವುದು.
4) ಬೋಧಕ ವೃಂದದವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವುದು.
5) ಕಾಲ -ಕಾಲಕ್ಕೆ ಔದ್ಯೋಗಿಕ ಬೇಡಿಕೆಗಳಂತೆ ಪಠ್ಯಕ್ರಮಗಳನ್ನು ಬದಲಾಯಿಸಿದ್ದಲ್ಲಿ ಆ ಪಠ್ಯಕ್ರಮಗಳ ಬಗ್ಗೆ ಅಧ್ಯಾಪಕರುಗಳಿಗೆ ನಿರಂತರ ಶೈಕ್ಷಣಿಕ ತರಬೇತಿ ನೀಡುವುದು.
6) ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಇಲಾಖೆಗೆ ಆರ್ಥಿಕ ಸಂಪನ್ಮೂಲಗಳನ್ನು ಬಲಪಡಿಸಿಕೊಳ್ಳುವುದು.
7) On -Line Interactive classes ಕಾರ್ಯಕ್ರಮ.
ಪರೀಕ್ಷಾ ಶಾಖೆ (ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿ)
1) ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸುವುದು.
2) ಡಿಪ್ಲೋಮಾ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯನ್ನು ವಿತರಿಸುವುದು.
3) ಗಣಕೀಕೃತ ಕೊಡಿಂಗ್ ಮತ್ತು ಡಿಕೊಡಿಂಗ್ ಪದ್ಧತಿ ಮೂಲಕ ಮೌಲ್ಯಮಾಪನದಲ್ಲಿ ಗೌಪ್ಯತೆಯನ್ನು ಕಾಪಾಡುವುದು.
4) ಪರೀಕ್ಷಾ ಸಮಯದಲ್ಲಿ ಆನ್ -ಲೈನ್ ನಲ್ಲಿ ಪರೀಕ್ಷಾ ಮೇಲ್ವಿಚಾರಣೆ ಮಾಡಿ ಪರೀಕ್ಷಾ ಕೆಲಸಗಳು ಸುಲಲಿತವಾಗಿ , ವ್ಯವಸ್ಥಿತವಾಗಿ ನಡೆಯುವಂತೆ ನಿಗವಹಿಸುವುದು.
5) ಅಭ್ಯರ್ಥಿಗಳ ಪಟ್ಟಿ ಮತ್ತು ಅಂಕ ಪಟ್ಟಿಗಳನ್ನು ರಾಜ್ಯದ ಎಲ್ಲಾ ಸರ್ಕಾರಿ /ಖಾಸಗಿ / ಅನುದಾನಿತ / ಖಾಸಗಿ ಅನುದಾನರಹಿತ ಪಾಲಿಟೆಕ್ನಿಕ್ ಗಳಿಗೆ ತಯಾರಿಸಿ ಆನ್ ಲೈನ್ ಮೂಲಕ ಪ್ರಕಟಿಸುವುದು.
6) ಪಾಲಿಟೆಕ್ನಿಕ್ ಗಳಿಗೆ ಸಂಯೋಜನೆ ನೀಡುವುದು.
7) ಪರೀಕ್ಷಾ ಸಂಬಂಧಿ ಕೆಲಸಗಳಿಗೆ ಸಿಬ್ಬಂದಿ /ಅಧಿಕಾರಿಗಳನ್ನು ನಿಯೋಜಿಸುವುದು.
8) ಮೌಲ್ಯಮಾಪನದಲ್ಲಿ ಆಡಳಿತ ವಿಕೇಂದ್ರೀಕರಣ.
9) ಅರ್ಹತಾ ಪ್ರಮಾಣ ಪತ್ರ ಮತ್ತು ವಲಸೆ ಪ್ರಮಾಣ ಪತ್ರ ಮತ್ತು ಇತರೇ ಪ್ರಮಾಣ ಪತ್ರ ಮತ್ತು ಇತರೆ ಪ್ರಮಾಣ ಪತ್ರಗಳನ್ನು "ಸಕಾಲ ಕಾರ್ಯಕ್ರಮ " ದಡಿಯಲ್ಲಿ ನೀಡುವುದು.
10) ರಾಜ್ಯದ ಎಲ್ಲಾ ಸರ್ಕಾರಿ /ಖಾಸಗಿ / ಅನುದಾನಿತ / ಖಾಸಗಿ ಅನುದಾನರಹಿತ ಪಾಲಿಟೆಕ್ನಿಕ್ ಗಳಿಗ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಉತ್ತರ ಪತ್ರಿಕೆಗಳನ್ನು ಮುದ್ರಿಸಿ ಸರಬರಾಜು ಮಾಡುವುದು.
ತನಿಖಾ ಶಾಖೆ
1) ಶೈಕ್ಷಣಿಕ ಚಟುವಟಿಕೆಗಳ ದಾಖಲಾತಿ ನಿರ್ವಹಣೆ ,ಬೋಧನಾ ಪದ್ಧತಿಯ ಮಟ್ಟವನ್ನು ಎ ಐ ಸಿ ಟಿ ಇ ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತಾಲಯ ನೀತಿಗಳಂತೆ ಸುಧಾರಣೆಗೊಳಿಸುವ ಬಗ್ಗೆ ಪರಿವೀಕ್ಷಣೆ.
2) ಶೈಕ್ಷಣಿಕ ಮತ್ತು ಆಡಳಿತಕ್ಕೆ ಸಂಬಂದ ಪಟ್ಟ ರಾಜ್ಯದ ಎಲ್ಲಾ ಸರ್ಕಾರಿ ,ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್ ಗಳ ಪರಿವೀಕ್ಷಣೆ.
3) ಆಡಳಿತ ಪದ್ಧತಿ , ಮೂಲಭೂತ ಸೌಲಭ್ಯ ,ಪ್ರಯೋಗಾಲಯ ಸೌಕರ್ಯ ,ಸಿಬ್ಬಂದಿ ಸೂಕ್ತತೆಗಳ ಬಗ್ಗೆ ಪರಿವೀಕ್ಷಣೆ.
ನಿರಂತರ ತಾಂತ್ರಿಕ ಕೋಶ ,ಕರ್ನಾಟಕ (CCTEK)
1) ಐ.ಟಿ ಯೇತರ ವಿದ್ಯಾರ್ಥಿಗಳಿಗೆ ಐ.ಟಿ ಮಾಹಿತಿ ಒದಗಿಸುವ ತರಬೇತಿ ನಡೆಸುವುದು.
2) ಕಾಲ-ಕಾಲಕ್ಕೆ ಔದ್ಯೋಗಿಕ ಬೇಡಿಕೆಗಳಂತೆ ಪಠ್ಯಕ್ರಮಗಳನ್ನು ಬದಲಾಯಿಸಿದ್ದಲ್ಲಿ ಆ ಪಠ್ಯಕ್ರಮಗಳ ಬಗ್ಗೆ ಅಧ್ಯಾಪಕರುಗಳಿಗೆ ನಿರಂತರ ಶೈಕ್ಷಣಿಕ ತರಬೇತಿ ನೀಡುವುದು.
3) ಕೈಗಾರಿಕೆಗಳಲ್ಲಿನ ಅಕುಶಲ ಕಾರ್ಮಿಕರಿಗೆ ತಾಂತ್ರಿಕ ಕೌಶಲ್ಯ ತರಬೇತಿ ನೀಡುವುದು.
4) ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಇಲಾಖೆಗೆ ಆರ್ಥಿಕ ಸಂಪನ್ಮೂಲಗಳನ್ನು ಬಲಪಡಿಸಿಕೊಳ್ಳುವುದು.
5) ಬೋಧಕ ವೃಂದದವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವುದು.
ತಾಂತ್ರಿಕ ಶಿಕ್ಷಣ ಸುಧಾರಣಾ ಯೋಜನೆ(TEQIP)
1) ವಿಷಯ ಪರಿಣಿತಿಗಾಗಿ ಶಿಕ್ಷಕರಿಗೆ ಮತ್ತು ಶಿಕ್ಷಕೇತರಿಗೆ ಸಲಹೆ ಮತ್ತು ತರಬೇತಿ ಪ್ರಕ್ರಿಯೆ.
2) ಅತ್ಯಾಧುನಿಕ ಉಪಕರಣಗಳ ಲಭ್ಯತೆ ಮತ್ತು ಪ್ರಯೋಗಾಲಯಗಳ ಆಧುನೀಕರಣ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ,ಕಟ್ಟಡ ,ಪುಸ್ತಕ ,ಶೈಕ್ಷಣಿಕ ಸಾಮಗ್ರಿಗಳು ಮತ್ತು ಅಂತರ್ಜಾಲ ವ್ಯವಸ್ಥೆ ಸೌಕರ್ಯ ಇತ್ಯಾದಿ.
3) ಆರ್ಥಿಕತೆ ಮತ್ತು ಸಮುದಾಯ ಸೇವೆ , ತಾಂತ್ರಿಕ ಶಿಕ್ಷಣದಲ್ಲಿ ಗುಣಾತ್ಮಕ ಮತ್ತು ಪರಿಣಾಮಕಾರಿ ಅಭಿವೃದ್ಧಿ.
4) ಯೋಜನಾ ನಿರ್ವಹಣೆ ,ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ.