ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ

 

      ಪರಿಚಯ

 

ತಾಂತ್ರಿಕ ವಿಷಯದ ಕೌಶಲ್ಯವನ್ನು ಕಲಿಸುವ ವಿದ್ಯಾಸಂಸ್ಥೆಗಳನ್ನು 1943ನೇ ಇಸವಿಯಲ್ಲಿ ಪ್ರಾರಂಭಿಸಲಾಗಿತ್ತು.  ಅವುಗಳನ್ನು "ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್" ಗಳೆಂದು ಕರೆಯಲಾಗುತಿತ್ತು. ನಂತರ ಇದನ್ನು ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಪಠ್ಯಕ್ರಮದೊಂದಿಗೆ "ಪಾಲಿಟೆಕ್ನಿಕ್ " ಗಳೆಂದು ಮರು ನಾಮಕರಣ ಮಾಡಿಲಾಯಿತು. ಆಗ ಸಂಸ್ಥೆಗಳು "ಪಬ್ಲಿಕ್ ಇನ್ ಸ್ತ್ರಕ್ಷನ್ ಡಿಪಾರ್ಟ್ಮೆಂಟ್ " ನ ಅಧೀನದಲ್ಲಿದ್ದವು. ತದನಂತರ ಪಾಲಿಟೆಕ್ನಿಕ್ ಸಂಸ್ಥೆಗಳ ಹಾಗು ತಾಂತ್ರಿಕ ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಾದುದರಿಂದ 1959 ರಲ್ಲಿ "ತಾಂತ್ರಿಕ ಶಿಕ್ಷಣ ಇಲಾಖೆ" ಅಸ್ತಿತ್ವಕ್ಕೆ ಬಂದಿತು.

ತಾಂತ್ರಿಕ ಶಿಕ್ಷಣ ಆಯುಕ್ತಾಲಯವು  ನಿರ್ದೇಶನಾಲಯವು ರಾಜ್ಯ ಮತ್ತು ರಾಷ್ಟ್ರ ನೀತಿಯೊಂದಿಗೆ ತಾಂತ್ರಿಕ ಶಿಕ್ಷಣದ ಯೋಜಿತ ಅಭಿವೃದ್ದಿಯನ್ನು ಖಚಿತಪಡಿಸುತ್ತದೆ. ಉದ್ಯಮ, ವ್ಯವಹಾರ ಮತ್ತು ಸಮುದಾಯಕ್ಕೆ ಅಗತ್ಯವಾದ ಆಧಾರಿತ, ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಮಾನವ ಸಂಪನ್ಮೂಲಗಳನ್ನು ಒದಗಿಸಲು ಇಲಾಖೆ ಬದ್ದವಾಗಿದೆ. ಇಲಾಖೆಯು 85 ಸರ್ಕಾರಿ, 44 ಅನುದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್ ಗಳು, 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು 9 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 6 ಕಿರಿಯ ತಾಂತ್ರಿಕ ಶಾಲೆಗಳನ್ನು ನಿರ್ವಹಿಸುತ್ತದೆ.

ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಕಾರ್ಯವು ತಾಂತ್ರಿಕ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವುದು ಹಾಗೂ ಅರ್ಹ ಅಭ್ಯರ್ಥಿಗಳಿಗೆ ತಾಂತ್ರಿಕ ಪರೀಕ್ಷಾ ಮಂಡಳಿಯು ಡಿಪ್ಲೋಮಾ/ಪೋಸ್ಟ್ ಡಿಪ್ಲೋಮಾ/ಟೈಲರಿಂಗ್ ಕೋರ್ಸ್ ಗಳಿಗೆ ಪರೀಕ್ಷೆ ನಡೆಸಿ, ಅರ್ಹ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡುವುದು. 

     

      ದೂರದೃಷ್ಟಿ

 

 1. ಯೋಜನಬದ್ಧವಾದ ಹಾಗೂ ಸಮರ್ಥವಾದ ತಾಂತ್ರಿಕ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯದಲ್ಲಿ ವೃದ್ಧಿಗೊಳಿಸುವುದು.
 2. ಬೇಡಿಕೆಗೆ ಆನುಗುಣವಾಗಿ ಡಿಪ್ಲೋಮಾ ಸಂಸ್ಥೆಗಳಿಗೆ ಯೋಜನೆಗಳನ್ನು ರೂಪಿಸುವುದು ಮತ್ತು ಸಾಕಷ್ಟು ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
 3. ನಿಷ್ಪಕ್ಷಪಾತ ಮೌಲ್ಯಮಾಪನ ಪದ್ದತಿ ಹಾಗೂ ದೃಢೀಕರಣ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗಳಿಗೆ ನೀಡುವುದು.
 4. ಎ.ಐ.ಸಿ.ಟಿ.ಇ, ಎಂ.ಹೆಚ್.ಆರ್.ಡಿ , ಎನ್,ಐ.ಟಿ.ಟಿ.ಆರ್, ವಿಶ್ವವಿದ್ಯಾಲಯಗಳು , ಕೈಗಾರಿಕೆಗಳು ಮತ್ತು ಇತರೆ ರಾಜ್ಯದ ನಿರ್ದೇಶನಾಲಯಗಳೊಂದಿಗೆ ಸಮನ್ವಯ ಸಾಧಿಸುವುದು.
 5. ತಾಂತ್ರಿಕ ಶಿಕ್ಷಣ ವಲಯಕ್ಕೆ ಅವಶ್ಯವಿರುವ ದೀರ್ಘಾವಧಿ ಯೋಜನೆಗಳನ್ನು ನಿರೂಪಿಸುವುದು ಹಾಗೂ ಆಯವ್ಯಯ ವಿಭಜನೆ ಮಾಡಿ ಸರಿಯಾದ ಹಂಚಿಕೆ ಮತ್ತು ಸದ್ಬಳಕೆ ಮಾಡುವುದು.
 6. ಕೆಳಗಿನ ಅಂಶಗಳಿಗೆ ಗುಣಾತ್ಮಕವಾದ ಮತ್ತು ಸಾಮಾಜಿಕ ನ್ಯಾಯಯುತವಾದ ರೂಪರೇಷೆಗಳನ್ನು ನಿಯಮಿತಗೊಳಿಸುವುದು.(i)ವಿದ್ಯಾರ್ಥಿಗಳ ಪ್ರವೇಶಾತಿ (ii)ಶಿಕ್ಷಕ ವೃಂದದ ನೇಮಕಾತಿ, ತರಬೇತಿ ಮತ್ತು ತಾಂತ್ರಿಕ ಶಿಕ್ಷಣದ ಸರ್ವಾಂಗೀಣ ಅಭಿವೃದ್ದಿ.
 7. ವಿದ್ಯಾರ್ಥಿಗಳ ಹಾಗೂ ಶಿಕ್ಷಕ ವರ್ಗದ ಸರ್ವಾಂಗೀಣ ಅಭಿವೃದ್ದಿ, ವಿದ್ಯಾರ್ಥಿಗಳಿಗೆ ಉದ್ಯೋಗ-ಮಾರ್ಗದರ್ಶನ,ಕುಂದು ಕೊರತೆಗಳ ಪರಿಹಾರ ಮತ್ತು ಸಲಹಾ ಸೇವೆಗಳನ್ನು ನೀಡುವುದು.
 8. ಆಯುಕ್ತಾಲಯದ  ಶಾಖೆಗಳು ಸಾರ್ವಜನಿಕರ ಹಾಗೂ ಎಲ್ಲಾ ಸಂಸ್ಥೆಗಳೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳುವಂತೆ ನೋಡುವುದು ಮತ್ತು ಕುಂದು ಕೊರತೆಗಳ ನಿವಾರಣೆಗೆ ಸ್ಪಂದಿಸುವುದು.

 

           ನಿರ್ದಿಷ್ಟ ಪಡಿಸಿದ ಗುರಿ

 

     ರಾಷ್ಟ್ರ ಹಾಗೂ ರಾಜ್ಯದ ಶೈಕ್ಷಣಿಕ ನೀತಿಗನುಗುಣವಾಗಿ ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲು ತಾಂತ್ರಿಕ ಶಿಕ್ಷಣ ಆಯುಕ್ತಾಲಯವು ಬದ್ಧವಾಗಿರುತ್ತದೆ.ಆಯುಕ್ತಾಲಯವು ಕೈಗಾರಿಕೆ, ವಾಣಿಜ್ಯ ಮತ್ತು ಸಮಾಜದ ಅವಶ್ಯಕತೆಗೆ ತಕ್ಕಂತೆ ಗುಣಾತ್ಮಕ, ತಾಂತ್ರಿಕ ಮತ್ತು  ವೃತ್ತಿಪರ ಪರಿಣಿತ ಮಾನವ ಸಂಪನ್ಮೂಲವನ್ನು ಒದಗಿಸಲು ಬದ್ಧವಾಗಿರುತ್ತದೆ . ಮೇಲಿನ ದೂರದೃಷ್ಟಿಯ ಗುರಿಯನ್ನು ಈ ಕೆಳಕಂಡಂತೆ ಸಾಧಿಸಲಾಗುವುದು.

 1. ಸಮಾಜದ ಅವಶ್ಯಕತೆಯನ್ನು ಪೂರೈಸುವಂತಹ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ,ನಿರ್ವಹಣೆ ಮತ್ತು ಬೆಳವಣಿಗೆಗೆ ಶ್ರಮಿಸುವುದು.
 2. ಯುವಕರು ಮತ್ತು ವಯಸ್ಕರ ಅವಶ್ಯಕತೆಗೆ ತಕ್ಕಂತೆ ಸಾಂಪ್ರದಾಯಿಕ ಮತ್ತು ಸಂಪ್ರದಾಯಕವಲ್ಲದ ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸಿ ತಾಂತ್ರಿಕ ಶಿಕ್ಷಣವನ್ನು ವಿಸ್ತಾರಗೊಳಿಸಲು ಪ್ರೋತ್ಸಾಹಿಸುವುದು.
 3. ಬದಲಾಗುತ್ತಿರುವ ಕೈಗಾರಿಕಾ ನೀತಿ ಮತ್ತು ಸಮಾಜದ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸುವ ಜವಾಬ್ಧಾರಿಯುತ ಮತ್ತು ಸಮರ್ಥ ತಾಂತ್ರಿಕ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವುದು.
 4. ವೃತ್ತಿ ಪರವಾದ ಮಾದರಿ ಆಡಳಿತ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸುವುದು.
 5. ಪರಿಣಾಮಕಾರಿ ನಿರ್ಣಯಗಳಿಗಾಗಿ ಉತ್ತಮ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸುವುದು.
 6. ಮಹಿಳೆಯರು ,ಅಂಗವಿಕಲರು,ಗ್ರಾಮೀಣರು ,ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರುಗಳ ವಿದ್ಯಾಭ್ಯಾಸದ ಅವಶ್ಯಕತೆಯನ್ನು ಪೂರೈಸಲು ಹೆಚ್ಚಿನ ಆದ್ಯತೆಯನ್ನು ನೀಡುವುದು.
 7. ವಿದ್ಯಾರ್ಥಿಗಳ ಉದ್ಯೋಗ ಮತ್ತು ಮಾರ್ಗದರ್ಶನ ಸೇವೆಗಳನ್ನು ಬಲಪಡಿಸುವುದು.
 8. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಹಯೋಗ ಬೆಳೆಸುವುದು.

 

     ನಮ್ಮ ಪ್ರಮುಖ ಮೌಲ್ಯಗಳು

 

      i) ಸಮಾನತೆ, ಮಾನವೀಯತೆ
      ii) ಪಾರದರ್ಶಕ ಕಾರ್ಯಾಚರಣೆ
     iii) ಪ್ರವೇಶ ಸಾದ್ಯತೆ,ದಕ್ಷತೆ
     iv) ತೆರೆದ ಸಂವಹನ ಮತ್ತು 
     v) ಪರಿಸರ ಅಭಿವೃದ್ದಿಗಾಗಿ ಕಾಳಜಿ

  

            ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕ್ರಿಯೆಯಲ್ಲಿನ ಭಾಗಿದಾರರು

 

 1. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿಯಾಲಯ ,ಭಾರತ ಸರ್ಕಾರ.  
 2. ಉನ್ನತ ಶಿಕ್ಷಣ ಇಲಾಖೆ ,ಕರ್ನಾಟಕ ಸರ್ಕಾರ.   
 3. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ.   
 4. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಟೀಚರ್ಸ್ ಟ್ರೈನಿಂಗ್ ಅಂಡ್ ರಿಸರ್ಚ್. 
 5. ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜುಕೇಶನ್.  
 6. ಕಾನ್ ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್.   
 7. ದಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ & ಸರ್ವೀಸ್ ಕಂಪೆನಿ.   
 8. ದಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್(ಭಾರತ).   
 9. ರಾಷ್ಟ್ರೀಯ ಮಾನ್ಯತಾ ಮಂಡಳಿ. 
 10. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಯಮ.

 

           ಆಯುಕ್ತಾಲಯದ  ಕಾರ್ಯಗಳು

 

    1) ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳ ಹಾಗೂ ಡಿಪ್ಲೋಮಾ ಪಾಲಿಟೆಕ್ನಿಕ್ ಗಳ ಆಡಳಿತ ನಿಯಂತ್ರಣ , ಮೇಲ್ವಿಚಾರಣೆ ಹಾಗೂ ಅಭಿವೃದ್ದಿಗಾಗಿ ಯೋಜನೆಯನ್ನು ರೂಪಿಸುವುದು , ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸುವುದು.

    2) ರಾಜ್ಯದಲ್ಲಿನ ಇಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೋಮಾ ಮಟ್ಟದಲ್ಲಿ ಹೊಸ ಕೋರ್ಸ್ ಗಳನ್ನು ಗುರುತಿಸುವುದು ಮತ್ತು ಹೊಸ ಕಾಲೇಜು ಪ್ರಾರಂಭಿಸಲು ಮೂಲಭೂತ ಸೌಲಭ್ಯ ಪರಿಶೀಲಿಸಿ ಶಿಫಾರಸ್ಸು ಮಾಡುವುದು.

   3) ತಾಂತ್ರಿಕ ಗುಣಮಟ್ಟವನ್ನು ಕಾಪಾಡಲು ಎಲ್ಲಾ ತಾಂತ್ರಿಕ ಸಂಸ್ಥೆಗಳ ತಪಾಸಣೆಯನ್ನು ಕಾಲಕಾಲಕ್ಕೆ ನಡೆಸುವುದು.

   4) ಡಿಪ್ಲೋಮಾ ಪ್ರವೇಶಾತಿಗಾಗಿ ಅಭ್ಯರ್ಥಿಗಳ ಆಯ್ಕೆಗೆ ಸೂಕ್ತ ಕಾರ್ಯವಿಧಾನ ತಯಾರಿಸಿ, ಮಾರ್ಗದರ್ಶನ ನೀಡುವುದು.

   5) ಡಿಪ್ಲೋಮಾ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವುದು , ತೇರ್ಗಡೆಯಾದ ಅಭ್ಯರ್ಥಿಗಳಿಗೆ ಡಿಪ್ಲೋಮಾ ತರುವಾಯ ಪ್ರಮಾಣ ಪತ್ರಗಳನ್ನು ವಿತರಿಸುವುದು.

   6) ಸರ್ಕಾರಿ ಮತ್ತು ಖಾಸಗಿ ಅನುದಾನಿತ ತಾಂತ್ರಿಕ ಸಂಸ್ಥೆಗಳಿಗೆ ಶೈಕ್ಷಣಿಕ ಮಂಜೂರಾತಿ ನೀಡುವುದು.

   7) ಅನುದಾನಿತ ಪಾಲಿಟೆಕ್ನಿಕ್ ಗಳಿಗೆ ಅನುದಾನ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಮಂಜೂರು ಮಾಡುವುದು.

   8) ಉನ್ನತ ವ್ಯಾಸಂಗ ಮತ್ತು ಸಂಶೋಧನೆಗಾಗಿ ಬೋಧಕ ಸಿಬ್ಬಂದಿಯನ್ನು ನಿಯೋಜಿಸುವುದು.

   9) ಆಡಳಿತ ಮತ್ತು ಶೈಕ್ಷಣಿಕ ನೀತಿಗಳನ್ನು ಕಾಪಾಡುವುದು ಹಾಗೂ ಮೂಲಭೂತ ಸೌಕರ್ಯಗಳ ಇರುವಿಕೆ ಕುರಿತು ತಪಾಸಣೆ ನಡೆಸುವುದು.ತಾಂತ್ರಿಕ ಸಂಸ್ಥೆಗಳು ಮತ್ತು ವರ್ಗವಾರು ವಿಂಗಡಣೆ

ಸಂಸ್ಥೆಗಳು
ಇಂಜಿನಿಯರಿಂಗ್ ಕಾಲೇಜುಗಳು
ಪಾಲಿಟೆಕ್ನಿಕ್ ಗಳು
ಕಿರಿಯ ತಾಂತ್ರಿಕ ಶಾಲೆಗಳು
1. ಸರ್ಕಾರಿ
13 +1*
83+2*
06
2.ಅನುದಾನಿತ
09+2*
44
-
3.ಖಾಸಗಿ
164 +1*
196
06
4.ವಿಶ್ವವಿದ್ಯಾಲಯ
02+1*
-
-

5.ಅಲ್ಪಸಂಖ್ಯಾತ Minority Colleges(MC)

15
-
-
ಒಟ್ಟು
208
325
12

  *ಸಂಜೆ ಪಾಲಿಟೆಕ್ನಿಕ್ /ಇಂಜಿನಿಯರಿಂಗ್ ಕಾಲೇಜುಗಳು

 

ಇಲಾಖೆಗೆ ಸೇವೆ ಸಲ್ಲಿಸಿದ ಆಯುಕ್ತರ ಹೆಸರು ಮತ್ತು ಸೇವಾ ಅವಧಿ

 

ಕ್ರ.ಸಂ
ಹೆಸರು
ಇಂದ
ವರೆಗೆ
1
ಶ್ರೀ ಪ್ರದೀಪ್ ಪಿ,   ಭಾ ಆ ಸೇ
19/06/2020  
2
 
   

 

   ಇಲಾಖೆಗೆ ಪ್ರಾರಂಭದಿಂದ ಸೇವೆ ಸಲ್ಲಿಸಿದ ನಿರ್ದೇಶಕರ ಹೆಸರು ಮತ್ತು ಸೇವಾ ಅವಧಿ

 

ಕ್ರ.ಸಂ
ಹೆಸರು
ಇಂದ
ವರೆಗೆ
1
ಶ್ರೀ ಕೆ. ಚೆನ್ನಬಸವಯ್ಯ
ಲೋಕೋಪಯೋಗಿ ಇಲಾಖೆ
19.10.1959
11.05.1961
2
ಶ್ರೀ ಐ.ಎಂ. ಮುಗದಮ್
ಲೋಕೋಪಯೋಗಿ ಇಲಾಖೆ
20.12.1961
07.10.1964
3
ಡಾ || ಬಿ.ಎಲ್ .ಶಾಂತಮಲ್ಲಪ್ಪ
ತಾ ಶಿ ಇ
08.10.1964
18.04.1974
4
ಶ್ರೀ ಪಿ.ಎನ್. ಪದ್ಮನಾಭ
ಭಾ ಆ ಸೇ
19.04.1974
12.06.1974
5
ಶ್ರೀ ಕೆ . ಎಸ್ . ಬಲ್ಲಾಳ್
ಲೋಕೋಪಯೋಗಿ ಇಲಾಖೆ
12.06.1974
31.12.1975
6
ಶ್ರೀ ಆರ್.ಎಲ್. ಶ್ರೇಷ್ಠ
ಲೋಕೋಪಯೋಗಿ ಇಲಾಖೆ
01.01.1976
30.04.1977
7
ಶ್ರೀ ಎ.ಆರ್. ಭಾವಿಕಟ್ಟಿ
ಲೋಕೋಪಯೋಗಿ ಇಲಾಖೆ
01.01.1978
30.04.1978
8
ಶ್ರೀ ಎಂ.ಆರ್. ಧರ್ಮಯ್ಯಗೌಡ
ಲೋಕೋಪಯೋಗಿ ಇಲಾಖೆ
11.05.1978
30.11.1979
9
ಶ್ರೀ ನೂರ್ ಅಹ್ಮದ್
ಲೋಕೋಪಯೋಗಿ ಇಲಾಖೆ
01.12.1979
26.11.1981
10
ಪ್ರೊ || ಬಿ. ಬಸವರಾಜು
ತಾ ಶಿ ಇ
27.11.1981
12.04.1982
11
ಶ್ರೀ ಡಿ. ಕೆ . ಸತ್ಯನಾರಾಯಣಶೆಟ್ಟಿ
ಲೋಕೋಪಯೋಗಿ ಇಲಾಖೆ
13.04.1982
26.12.1987
12
ಶ್ರೀ ಬಿ. ಎನ್ . ಕೃಷ್ಣಮೂರ್ತಿ
ಬಿ ಡಿ ಟಿ
26.12.1987
30.10.1990
13
ಪ್ರೊ || ಪಿ .ವಿ . ಭಂಡಾರಿ
ಬಿ ಡಿ ಟಿ
31.10.1990
31.01.1996
14
ಡಾ||ನಾಗಂಬಿಕದೇವಿ
ಭಾ ಆ ಸೇ
01-02-1996
22-05-1996
15
ಡಾ||ಕೆ. ಬಾಲವೀರ ರೆಡ್ಡಿ
ಎನ್ಐಟಿ,ಸುರತ್ಕಲ್
23.05.1996
31.03.2001
16
ಡಾ|| ವಿ. ಸೀನಪ್ಪ
ಎ ಐ ಟಿ (ಅನುದಾನಿತ)
23.07.2001
22.07.2002
17
ಶ್ರೀ ಕೆ. ಚೆನ್ನಕೇಶವ ಕಲ್ಮಾಡಿ
ತಾ ಶಿ ಇ
23.07.2002
30.11.2003
18
ಪ್ರೊ || ಕೆ. ಬಸವರಾಜು
ತಾ ಶಿ ಇ
01.12.2003
30.06.2006
19
ಶ್ರೀ ಮಹಮ್ಮದ್ ಅಲಿ
ತಾ ಶಿ ಇ
01.07.2006
31.01.2007
20
ಶ್ರೀಮತಿ ಎಂ.ವಿ. ಜಯಂತಿ
ಭಾ ಆ ಸೇ
02.02.2007
08.01.2008
21
ಶ್ರೀ ಟಿ. ಎ .ಪಾರ್ಥಸಾರಥಿ
ಭಾ ಆ ಸೇ
09.01.2008
28-05-2009
22
ಶ್ರೀ ಎನ್.ಡಿ. ಪ್ರಸಾದ್
ತಾ ಶಿ ಇ
28-05-2009
02-06-2009
23
ಶ್ರೀ ಹೆಚ್.ಯು. ತಳವಾರ
ತಾ ಶಿ ಇ
03-06-2009
 31-05-2021
24
 ಶ್ರೀ ಆರ್ ಮಂಜುನಾಥ
ತಾ ಶಿ ಇ( ಪ್ರಭಾರೆ)
01-06-2021
31-01-2022 
25
ಶ್ರೀ ಎನ್ ರವಿಚಂದ್ರನ್
ತಾ ಶಿ ಇ
01-02-2022
30-04-2023 
26
ಡಾ| ಕೆ ಜಿ ಚಂದ್ರಶೇಖರ
ತಾ ಶಿ ಇ
03-05-2023
 

 

 

ಇತ್ತೀಚಿನ ನವೀಕರಣ​ : 15-05-2023 10:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080